Posts

ಬಾಳಕುದುರು ಮಠದ ಇತಿಹಾಸ

Image
 ಮೂಲ ಲೇಖನ: ಡಾ. ಪಿ. ಗುರುರಾಜ ಭಟ್  ಉಲ್ಲೇಖ : "ಸ್ವಾತಂತ್ರ್ಯಾಂಕ" ಎಂಬ ಅಂಕಣ. "ಪ್ರಕಾಶ" ಎಂಬ  ಪುಸ್ತಕ 1969  ಸಂಗ್ರಹ: ಶ್ರೀ ನಾಗರಾಜ ವಾರಂಬಳ್ಳಿ, ಹವ್ಯಾಸಿ ಛಾಯಾಗ್ರಾಹಕ, ಮೂಡುಗರಡಿ, ಬ್ರಹ್ಮಾವರ  ದಿನಾ೦ಕ ೧೧.೦೮.೨೦೨೦ ರಂದು "ಶ್ರೀಮಠ ಬಾಳೆಕುದುರು" ಇವರ facebook ಪೇಜ್ ನಲ್ಲಿ ಪ್ರಕಟಗೊಂಡ ಲೇಖನದ ಪ್ರತಿಯಲ್ಲಿರುವಂತೆ. ದಕ್ಷಿಣಕನ್ನಡ ಜಿಲ್ಲೆಯ ಧಾರ್ಮಿಕ ಸಂಸ್ಥೆಗಳಲ್ಲಿ ಬಾಳಕುದುರು ಮಠವು ಒಂದಾಗಿದೆ. ಇದು ಇತಿಹಾಸ ಕಾಲದಲ್ಲಿ ನಮ್ಮ ಜಿಲ್ಲೆಯಲ್ಲಿ ತುಂಬಾ ಪ್ರಭಾವಿತವಾದ ಮಠವಾಗಿತ್ತು. ಈ ಮಠಕ್ಕೆ ಅನೇಕ ಕಡೆಗಳಲ್ಲಿ ಶಿಷ್ಯವರ್ಗವಿತ್ತು. ಮಾತ್ರವಲ್ಲದೆ ಈ ಶಿಷ್ಯವರ್ಗವು ಇಂದಿಗೂ ವ್ಯಾಪಿಸಿಕೊಂಡಿದೆ ಎಂಬ ವಿಷಯವು ಗಮನಾರ್ಹವಾಗಿದೆ. ಈ ಮಠಕ್ಕೆ ಈಗ ಐರೋಡಿ, ಕೋಡಿ, ನೀಲಾವರ, ಚೇರ್ಕಾಡಿ, ಒಡ್ದರ್ಸೆ, ಹಾನೇಹಳ್ಳಿ, ಬಳ್ಕೂರು, ಕಂದಾವರ, ಹುತ್ತೂರು, ಅಂಜಾರು ಇತ್ಯಾದಿ ಗ್ರಾಮಗಳಲ್ಲಿ ಆಸ್ತಿ ಇರುವುದು ಕಂಡು ಬರುತ್ತದೆ. ಹುತ್ತೂರು ಮತ್ತು ಅಂಜಾರುಗಳಲ್ಲಿ ಉಪಮಠಗಳು ಇರುವುದನ್ನು ಗಮನಿಸಬಹುದು.  ಶ್ರೀಮಠ ಬಾಳಕುದುರು ಸುತ್ತ ಮುತ್ತ    ಬಾಳಕುದುರು ಮಠವು  ಭಾಗವತ ಸಂಪ್ರದಾಯ ವನ್ನು ಎತ್ತಿ ಹಿಡಿಯುವ ಒಂದು ಧಾರ್ಮಿಕ ಕೇಂದ್ರ. ಈ ಮಠವು ಉಡುಪಿ ತಾಲೂಕಿನ(೧೯೬೯ ರಂತೆ) ಮಾಬುಕಳದ  ಸಮೀಪವಿರುವ ಬಾಳಕುದುರು ಗ್ರಾಮದಲ್ಲಿದೆ. ಈ ಮಠದ ಸಮೀಪ ಹಂಗಾರಕಟ್ಟೆ ಎಂಬ ಚಿಕ್ಕ ಬಂದರಿದೆ.  ಬಾರಕೂರು ಸಂಸ್ಥಾನ  ವಾಗಿದ್ದ

ವರ್ಣಾಶ್ರಮಗಳು ಮತ್ತು ಧರ್ಮ

ವೇದಗಳಲ್ಲಿ ಎಷ್ಟೋ ವಿಷಯಗಳನ್ನು ಬೀಜರೂಪದಲ್ಲಿ ಹೇಳಲಾಗಿದೆ. (ಶ್ರುತಿ) ಇವುಗಳನ್ನು ಸ್ಮೃತಿಗಳಲ್ಲಿ ಶಾಸ್ತ್ರ ರೂಪದಲ್ಲಿ (ಶಾಸನಗಳಂತೆ) ವಿವರಿಸಲಾಗಿದೆ. ಪುರಾಣಗಳಲ್ಲಿ ಕಥೆಗಳ ಮೂಲಕ ತಿಳಿಹೇಳುವ ಪ್ರಯತ್ನ ಮಾಡಲಾಗಿದೆ. ಇತಿಹಾಸಗಳ ದೃಷ್ಟಾಂತಗಳನ್ನಿಟ್ಟು ಇವುಗಳನ್ನೇ ವಿವರಿಸುತ್ತಾ ಮಹಾಕಾವ್ಯಗಳನ್ನು ಹಣೆಯಲಾಗಿದೆ. ಸಾಲದಕ್ಕೆ ಇವುಗಳನ್ನು ಯೋಗ್ಯ ರೀತಿಯಲ್ಲಿ ವಿವರಿಸಲು ಸಿದ್ಧಾಂತ - ಭಾಷ್ಯಗಳು ಬಂದಿವೆ. ಶೃತಿಯೊಂದನ್ನು ಬಿಟ್ಟು ಎಲ್ಲದರಲ್ಲೂ ಅಷ್ಟಿಷ್ಟು ಧನಾತ್ಮಕ ಹಾಗೂ ಋಣಾತ್ಮಕ ಪ್ರಕ್ಷೇಪಗಳು, ಕವಿಸಮಯಾದಿಗಳು ಸೇರಿಹೋಗಿವೆ. ಇವುಗಳೆಲ್ಲದರ ಪ್ರಕಾರ ನಾಲ್ಕು ವರ್ಣಗಳು ಹಾಗೂ ನಾಲ್ಕು ಆಶ್ರಮಗಳನ್ನು ಹೇಳಲಾಗಿದ್ದು ಎಲ್ಲವಕ್ಕೂ ತಮ್ಮದೇ ಆದ ಕಟ್ಟುಪಾಡುಗಳಿವೆ. ಶೂದ್ರರಿಗೆ ಗ್ರಹಸ್ಥ ಧರ್ಮವೊಂದೇ ಇದ್ದರೂ ಅದರಲ್ಲಿ ಇತರರಿಗಿರುವಷ್ಟು ಕಟ್ಟುಪಾಡುಗಳಿಲ್ಲ. ಒಂದು ರೀತಿಯಲ್ಲಿ ಸ್ವತಂತ್ರ ಜೀವನ ಅವರದ್ದು. ಇದು ವರ್ಣಗಳಿಗೆಲ್ಲ ಪಂಚಾಂಗ ಇರುವಂತೆ. ಎಲ್ಲರೂ ಶೂದ್ರರನ್ನು ಅವಲಂಬಿಸಬೇಕು. ಅವರ ಸಂಖ್ಯೆ ಹೆಚ್ಚು. ಅವರಿಂದಲೇ ಸಮೃದ್ಧಿ, ಅವರಿಂದಲೇ ಉತ್ಪಾದನೆ, ಅವರು ರಾಷ್ಟ್ರದ ಸಂಪತ್ತು. ಅವರು ಲೋಹಶಾಸ್ತ್ರ, ಕಾಷ್ಟಶಾಸ್ತ್ರ, ತಂತ್ರಜ್ಞಾನ, ಕೃಷಿ ಮುಂತಾದ ಜೀವನಕಲೆಗಳನ್ನು ಬದುಕುವವರು. ಇವರು ಧನಧಾನ್ಯಸಂಚಯ ಮಾಡಬಹುದು ಆಸ್ತಿ ಪಾಸ್ತಿಗಳೆಲ್ಲ ಇವರ ಸ್ವತ್ತು. ವೈಶ್ಯರಿಗೆ ಬ್ರಹ್ಮಚರ್ಯ ಹಾಗೂ ಗೃಹಸ್ಥ ಧರ್ಮಗಳ ಕಟ್ಟುಪಾಡುಗಳಿವೆ. ಶೂದ್ರ

ಕಂಡುಳಿದವರು ಉಲಿದಂತೆ...

Image
                                                        (ಚಿತ್ರಕೃಪೆ:ಅಂತರ್ಜಾಲ) ನಿನ್ ವಾಲಿಕಳಿತ್ತ್... ಎಂತ ಗಡ ಬಜ್ಜವಾ ನಿಂದ್? ಅದೆಲ್ಲಿಂದ ತಂದ್ ಆ ರಿಚಿ ಬಾಯ್ಗ್ ಬಜಿ ಹಾಕ್ದಿ ಮಾರಾಯ? ಹೆಕ್ಕ ತಿಂಬುದಕ್ಕೆ ಸಸೂತ್ರ ಭಾಶಿಯೇ ಬತ್ತಿಲ್ಲೆ.... ಅವ ಸತ್ತ.... ಸಾಯ್ಲಿ.... ಹೋಕ್ವಡುಕೆ ಆ ರಾಘುನ ಎಂತ ಮಾಡ್ದೆ ಅಂತಾರೂ ಹೇಳಿ ಮುಗ್ಸುಕಾಗಿದ್ದಿತ? ವಾಲಿಕಳಿತ್ತ್..... ನಿಮ್ ಥೀಮೇ ಫುಲ್ ಕನ್ಫ್ಯೂಷನ್ ಮಾರಾಯ... ಲಗಾಡಿ ಅರಿತ್ ಮಾರಾಯ ನಿಂಗ್ ಈ ನಮುನಿ ಕತಿ ಬರುಕ್ ಹೇಳಿ ಕೊಟ್ಟದ್ದಾರೂ ಯಾರ್ ಮರಾಯ? ಪಿಚ್ಚರ್ ಮಾಡ್ವತಿಗ್ ಹಿಡ್ಕಂಡ್ ಜುಮಾದಿ ಆರೂ ಯಾವ್ದ್ ಮರಾಯ? ಇದ್ ಯಾವ್ ಕಾಲದ್ ಕತಿಯ? ತಗ್ಡ್ ಕೆಮರಾ... ಹಳೀ ಟೇಪ್ ರಿಕಾರ್ಡರ್... ಬ್ರ್ಯಾಂಡ್ ಗೊತ್ತಿಲ್ದಿದ್ ಬಾಟ್ಲಿ, ಡಿಸೆಲ್ ಬುಲೆಟ್ಟ್, ಅಂಬಾಸಿಡರ್ ಕಾರ್...ಬ್ಯಾಂಡಿನ್ ರಿಕಾರ್ಡ್...   ಎಲ್ಲ ಬೌಷ ನಾನ್ ಹುಟ್ಟ್ಕಾರ್ ಮೊದಲ್ ಇದ್ದವ್ವಾ ಕಾಂತ್... ಆ ಹೆಣ್ಣಿನ್ ಯಾಸ..ಫ್ಲೆಕ್ಸ್ ಬೋರ್ಡ್....ಹ್ಯಾಂಗಿಂಗ್ ಸ್ಯಾತ್ಮಿ, ಉಡ್ಪಿ ಕನಕ ಗೋಪ್ರ, ಚಿನ್ನದ್ ರಥ, ಮಂದಾರ್ತಿ ದೇವ್ಸ್ಥಾನದ್ ಗ್ವಾಪ್ರ ಎಲ್ಲ ಈ ಕಾಲದ್ ಕಾಣ್.... ಅಲ್ಲ ಮರಾಯ...ಗೋಳಿಗರ್ಡಿ ಮ್ಯಾಳದ್ ಆಂಟ ತೋರ್ಸಿ ಪೆರ್ಡೂರ್ ಮ್ಯಾಳ ಅಂತ್ಯಲೆ ಮರಾಯ? ಪಂಜುರ್ಲಿ ಉಪದ್ರ ಕೊಡ್ದೇ ಆಯ್ಕಣತ್ತ ನಿನ್ ಪಿಚ್ಚರಿಗೆ? ..... ಸಾಯ್ಲಿ ಸುಟ್ಕಣ್ ತಿಂಬುಕೆ ಪ್ರಸಂಗ ಆರೂ ಎಂತ ಮಾರಾಯ ಅದ್?   ತುರಪರಾಕ್ರಮಿ

ಕಲಿ

ಮೊನ್ನೆ ದಾರಿಯಲಿ ಕಂಡರಿಯದ ಕಾಳ ಪುರುಷಾಕೃತಿ ನನ್ನ ಪಾಡಿಗೆ ಹೋಗಲಾರದೆ ಹಲ್ಕಿರಿದೆ ಕುತೂಹಲ ತಾಳಲಾರದೆ ಕೈ ಚಾಚಿದೆ ಯಾರೆಂದು ಕೇಳಿದೆ ಪ್ರಿತಿಯಿಂದ ಹೇಳಿದ ’ ನಾನು ಕಲಿಪುರುಷ ’ ’ ಅಂದರೆ ನೀನು... ’ ’ ಅವನೆ! ’ ’ ಮನುಜರಲ್ಲಿ ವಿಷ ಬಿತ್ತುವವನು ’ ’........’ ’ ಅರಿಷಡ್ವರ್ಗಗಳನ್ನು ಮೆರೆಸುವವನು ’ ’ ಅನ್ಯಾಯ ಮಾಡಿಸುವವನು ’ ’ ರಕ್ತಪಾತಗಳಿಗೆ ಕಾರಣವಾಗುವವನು ’ ’ ನಿನ್ನ ಮೇಲೆ ಯುದ್ಧ ಸಾರಿದ್ದೇನೆ; ನಿನ್ನ ರಕ್ತ ಕುಡಿದೇ ನಾನು ನಿದ್ದೆ ಮಾಡುವುದು ’ ’ ಮಾನವ ಕುಲವೇ ನಿನ್ನ ವಿರುದ್ಧ ಸೇನೆಯಾಗಿ ಕಾದುತ್ತದೆ; ನಿನ್ನ ತಲೆ ನನ್ನ ಕಾಲ್ಚೆಂಡಾಗುತ್ತದೆ ’ ನಗುತ್ತಲೆಂದ, ’ ನನಗೆ ಯುದ್ಧ ಬೇಡ , ಆದರೆ ನಿನ್ನಲ್ಲಿನ ಯುದ್ಧಕ್ಕೆ ರಕ್ತ ಬೇಕು ’ ನಾವು ಯಾವಾಗ ಕಲಿಯುವುದೋ!

೧. ಮೊದಲ ಕನಸು

ಮಂಗಳೂರಿನಲ್ಲಿ ಅರೆಹೊಳೆ ಪ್ರತಿಷ್ಟಾನ ದವರು ನಮ್ಮ ೩ಕೆ ಸ್ನೇಹಿತರನ್ನು ಸೇರಿಸಿಕೊಂಡು ಏರ್ಪಡಿಸಿದ್ದ ಅಂತರ್ಜಾಲ ಕವಿಗಳ ಸಮಾವೇಶದಲ್ಲಿ  ಕವನವಾಚನ ಮಾಡಿ ಬೀಗುತ್ತಿದ್ದ ನನಗೆ ಪುಟ್ಟ ಹುಡುಗಿಯಂತೆ ಕಾಣುವ ನವಕವಯಿತ್ರಿಯೊಬ್ಬಳು ಒಂದು ಪುಸ್ತಕವನ್ನು ಉಡುಗೊರೆಯಾಗಿ ಕೊಟ್ಟು ವಿಮರ್ಶೆ ಬರೆಯಲು ಸೂಚಿಸಿದಾಗ ನಾವೂ ಬೀಗಿ ಹೋಗೊದ್ದೆವು. ’ ಮೊದಲ ಕನಸು ’ ಎಂಬ ಚೊಚ್ಚಲ ಕವನ ಸಂಕಲನದ ಕವನಗಳನ್ನು ಸಾಕಷ್ಟು ಹಿಂಜಿ ಒಂದು ಮುನ್ನುಡಿಯನ್ನು ಅದಾಗಲೇ ಹಿರಿಯರಾದ ಡಾ.ವಸಂತ ಕುಮಾರ ಪೆರ್ಲರು ನಮ್ಮ ಮುಂದಿಟ್ಟಿದ್ದರಿಂದ ನಮ್ಮ ಪಾಲಿಗಿದ್ದುದು ಕವನಗಳು ಮತ್ತು ಕಾವ್ಯಾನುಭವ ಮಾತ್ರ. ಕೊಟ್ಟ ಮಾತಿಗೆ ತಪ್ಪಬಾರದೆಂದು ಹಮ್ಮಿನಿಂದಲೇ ವಿಮರ್ಷೆ ಬರೆಯಲು ಪೆನ್ನು ಪುಸ್ತಕದೊಂದಿಗೆ ಕವಿತೆಗಳನ್ನು ಹರಡಿಕೊಂಡು ಕುಳಿತೆ. ನನ್ನಿಂದ ಬರೆಯಲಾಗಿದ್ದು ಇಷ್ಟೆ: ಮೊದಲ ಕನಸಿನ ಮೊದಲ ಕವನ “ ವಿಪರ್ಯಾಸ ” ದಿಂದಲೇ ಶುರುವಾಗುತ್ತದೆ. ಅದರ ಬಗ್ಗೆ ನಾನು ಬರೆಯಲಾಗಿದ್ದು ಹೀಗೆ: ದಿನ ದಿನವೂ ನದಿಯಂತೆ ಝರಿದು ಹರಿದು ಮೊರೆದು ನೆನಪಿನಲೆಗಳ ಸಾಗರ ಸೇರುವಾಗ ಮೊದಲ ಕನಸೂ ಉಪ್ಪುಪ್ಪು! ಚಾಂಚಲ್ಯ ಎಂಬುದು ಎರಡನೇ ಕವನ: ಹೂವು ಗಿಡದಲ್ಲೇ ನಗುತ್ತಿದ್ದರೆ ಚಂದ್ರ ಕೈಗೆ ಸಿಗದಿದ್ದರೂ ಕಣ್ಣಿಗೆ ತುಂಬಿಕೊಂಡ ಬೆಳದಂಗಳಲ್ಲಿ ಹೊಸ ಆಸೆಗಳು ಮೊಳೆಯುತ್ತವೆ ರಹಸ್ಯ ಎಂಬೊಂದು ಕವನದ ಸ್ಪೂರ್ತಿಯಿಂದ ಹೀಗೆ ಬರೆದೆ: ತಪಸ್ಸಿಗೊಲಿದ ಒಂಬತ್ತರ ಹಿಂದೆ ನನ್ನ

ನಾನು... ಮತ್ತೊಂದು ಗಣರಾಜ್ಯ ದಿನ

Image
ಗ್ಯಾಡ್ಜೆಟ್ಟುಗಳ ವಿಡಿಯೋಗೇಮ್ ಗಳ ಪೋಲಿ ಆಟಗಳ ಹೊಳೆಯ ಭ್ರಮಾಲೋಕದಲ್ಲಿ ದಿನನಿತ್ಯವೂ ಮುಳುಗೇಳುತ್ತಿರುವ ಯುವಮಿತ್ರರೆ, ನೌಕರಿ, ಚಾಕರಿ, ಸಂಸಾರ, ಜೀವನ, ಆಸ್ತಿ, ಹಣ,ಆರೋಗ್ಯ ಮುಂತಾದ ಮಹಾಭಾಗ್ಯ ಕೂಪದಲ್ಲಿ ಮುಳುಗಲೂ ಆಗದೆ ತೇಲಲೂ ಆಗದೆ ಸದಾ ಸಾಹಸಮಯ ಜೀವನವನ್ನು ತೂಗಿಸುತ್ತಾ ಯಾವ ಪುರುಷಾರ್ಥಕ್ಕೆಂದು ಯೋಚಿಸಲೂ ಸಮಯವಿಲ್ಲದೇ ಎಲ್ಲವನ್ನೂ ಬಲಿದಾನಗೈದಿರುವ ಸಂಸಾರಿ ಮಿತ್ರರೆ, ಅನಾಥ ಮಕ್ಕಳೆ, ನಿರ್ಭಾಗ್ಯರಾಗಿ ಇನ್ನೂ ಬದುಕಿರುವ ಮುದುಕರೆ, ನಿಮಗೆಲ್ಲರಿಗೂ ನಾನು ಮಾಡುವ ವಂದನೆಗಳು. ಇಂದಿನ ದಿನ ಗಣರಾಜ್ಯದಿನ.. ಅಂದರೆ ನಾನು ಇರುವೆ ಎಂಬ ಭ್ರಮೆ ಹುಟ್ಟಿದ ದಿನ.. ನನಗೆ ಗೊತ್ತು ಎಂದಿನಂತೇ ಈ ವರ್ಷವೂ ಕೆಲವರು ಮಹಾನುಭಾವರು ಬಾವುಟ ಹಾರಿಸಿ, ಸಿಹಿ ಕಾಯಿಲೆ ಹಬ್ಬುತ್ತಾ ತಮ್ಮ ಕೊಳಕು ಬಾಯಿಗಳಿಂದ ನನ್ನನ್ನು ಕೊಂದಾಡಲು ಉತ್ಸುಕರಾಗಿದ್ದಾರೆ. ನೀವೂ ಚಪ್ಪಾಳೆ ತಟ್ಟುವ ಉತ್ಸಾಹದ ಭರದಲ್ಲಿ ಕೈ ತುರಿಸಿಕೊಳ್ಳುತ್ತಿದ್ದೀರಿ. ಇಂತಹಾ ಸಮಯದಲ್ಲಿ ನಿಮಗೆ ನಾನು ನೆನಪು ಮಾಡಿಕೊಡುವ ಒಂದಷ್ಟು ಅಂಶಗಳಿವೆ. 1. ಗಾಂಧಿ: ನಾನು ಹುಟ್ಟುವಾಗಲೇ ಈ ಮನುಷ್ಯನನ್ನೂ ಕೊಂದಿದ್ದರು ಮತ್ತು ಅವನನ್ನು ಕೊಂದ ನಿರ್ದಯಿ ಕೊಲೆಗಡುಕನನ್ನೂ ಕೊಂದಿದ್ದರು. ಹಾಗಾಗಿ ನಾನು ಅವರಿಬ್ಬರನ್ನು ಎಂದಿಗೂ ಬೇಟಿಯಾಗಲು ಸಾಧ್ಯವೇ ಆಗಲಿಲ್ಲ. ಆದರೂ ಅದೇ ತಾನೆ ಅಂಬೆಗಾಲಿಕ್ಕುತ್ತಿದ್ದ ನನಗೆ ಆ ಪುಣ್ಯಾತ್ಮನ ಬಗ್ಗೆ ಹಲವಾರು ಪವಾಡದ ಕತೆಗಳನ್ನು ಚಾಚಪ್ಪ ಹೇಳಿ ನಂಬಿಸಿದ್ದ. ನಾನ

ಬದುಕು ಹೊಸದಾದ ಕತೆ

Image
ರಾತ್ರಿ ಪಾಳಿಯ ಇಬ್ಬರು ಕೆಲಸಗಾರರನ್ನು ಹೊತ್ತುಕೊಂಡು ಬಂದ ಗಾಡಿಗೆ ತಲೆ ಬಾಚದಿದ್ದರೂ ಸ್ನಾನ ಮಾಡಿದ ನೆಮ್ಮದಿಯಿಂದ ಹತ್ತಿ ಡ್ರೈವರ್ ಪಕ್ಕ ಕುಳಿತೆ. ಅವರನ್ನೆಲ್ಲ ಗೂಡು ಸೇರಿಸಿ ಹಗಲಿನವರನ್ನು ಕರೆದುಕೊಂಡು ಸೈಟ್ ಸೇರುವ ತರಾತುರಿಯಲ್ಲಿತ್ತು ಗಾಡಿ. ಹೀಗೆ ಎಪ್ಪತ್ತು ಎಂಭತ್ತರ ಸ್ಪೀಡಿನಲ್ಲಿ ಸಾಗುವಾಗ ತಣ್ಣಗೆ ಮಳೆ ಹನಿಯುತ್ತಿತ್ತು. ಸಿಡಿ ಯಲ್ಲಿ ಹೊಸದಾಗಿ ಜಾಕಿ ಹಾಡು ....ಎಕ್ಕ ರಾಜ ರಾಣಿ ನನ್ನಕೈ ಒಳಗೆ.... ಇನ್ನೂ ಮುಂದಿನ ಸಾಲು ಬಂದಿಲ್ಲ ಅದಾಗಲೇ ಅಡ್ಡರಸ್ತೆಯಿಂದೊಂದು ನಮ್ಮಷ್ಟೇ ದೊಡ್ಡ ವಾಹನ ಫುಲ್ ಲೋಡಾಗಿ ನಮ್ಮಗಿಂತ ಸ್ಪೀಡಿನಲ್ಲಿ ವಕ್ಕರಿಸಿದ್ದ. ನಮ್ಮ ಸ್ಪೀಡಿಗೆ ಬ್ರೇಕ್ ಹಾಕಿದ್ದರೂ ಢಿಕ್ಕಿ ಗ್ಯಾರೆಂಟಿ, ಎಡದಿಕ್ಕಿನಿಂದ ನುಗ್ಗಿದರೂ ಅದೇ ಕಥೆ. ಬಾಕಿ ಬಿದ್ದಿದ್ದು ಬಲಬದಿ....ನುಗ್ಗಿಸುವ ಪ್ರಯತ್ನದಲ್ಲಿ ಚಾಲಕನ ನಿಯಂತ್ರಣ ತಪ್ಪುತ್ತಿರುವುದು ತಿಳಿದಂತೆ ಎಲ್ಲದಕ್ಕೂ ಸಿದ್ಧನಾಗಿ ಕಣ್ಮುಚ್ಚಿದೆ. ನಕ್ಷತ್ರ ಲೋಕ ಕಂಡಂತಾದ ಹೊತ್ತಿಗೇ ತೂಗುಯ್ಯಲೆಯಲ್ಲಿ ತೇಲಿದ ಅನುಭವ. ಎಡಭುಜವನ್ನೂರಿ ಹಾಸಿಗೆಯ ಮೇಲೆ ಬಿದ್ದಂತಾಗುವಾಗಲೇ ಯಾರೋ ಮುಖಕ್ಕೆ ನೀರು ಸಿಂಪಡಿಸಿದಂತಾಗಿ ಕಣ್ತೆರೆದೆ. ಗಾಡಿಯ ಕೆಳಭಾಗದಲ್ಲಿ ಸಣ್ಣ ಹೊಗೆ ಕಂಡಂತಾಗಿ ಸಿನೆಮಾಗಳಲ್ಲಿ ನೋಡಿದ ಇಂಜಿನ್ ಸ್ಪೋಟದ ನೆನೆಪಾಗಿ ಓಟಕ್ಕಿತ್ತೆ...ನುಗ್ಗಿದ್ದು ಅಲ್ಲೊಂದು ಹೋಟೆಲ್ ಒಳಗೆ..ಅಲ್ಲೊಂದು ಕುರ್ಚಿಯ ಮೇಲೆ ಕುಳಿತ ನಂತರ ಕೈಕಾಲು ನಡುಕ ಅನುಭವಕ್ಕೆ ಬಂತು. ಯಾರೋ ಬಟ್ಟೆ ತಂದು