Posts

ನೂತನ ಸತ್ಯಾನ್ವೇಷಣೆ!

ಭಾರತೀಯ ಸಂಸ್ಕೃತಿಯಲ್ಲಿ ಸತ್ಯಕ್ಕೆ ಬಲುದೊಡ್ಡ ಸ್ಥಾನವಿದೆ. ಭಾರತೀಯರ ಸತ್ಯದ ಹಸಿವಿಗೆ ಕೊನೆಯಿಲ್ಲದಂತೆ ದಿನಕ್ಕೊಂದು ಸಿದ್ಧಾಂತಗಳು ಧರ್ಮಗಳು ಅವುಗಳ ಶಾಖೋಪಶಾಖೆಗಳು ಹುಟ್ಟಿ ವಿಕಸಿತಗೊಂಡು ಇಂದಿನ ದಿನ ಜಗತ್ತಿಗೆ ಒಂದು ಆಕರ್ಷಣೆಯ ಬಿಂದುವಾಗಿ ಕಾಣಲು ಕಾರಣವಾಗಿವೆ. ನಮಗೆ ಹೇಳುವ ಸತ್ಯಕ್ಕಿಂತ, ಕಾಣುವ -ಕೇಳುವ-ಅನುಭವಿಸಿ ದಕ್ಕಿಸಿಕೊಂಡಿದ್ದಕ್ಕಿಂತ ಮೂಲದ ಅರಿಯುವ ಅರಿತೂ ಅರಿಯದೇ ಉಳಿದ ನಿತ್ಯ ಸತ್ಯವೇ ಮುಖ್ಯ. ಸತ್ಯದ ಮುಖಗಳು: ಸತ್ಯವು ಸತ್ಯಾನ್ವೇಷಕನನ್ನೂ ಶ್ರುತಿಕಾರನನ್ನೂ, ಶ್ರುತಿ ಸ್ಮೃತಿಗಳನ್ನೂ ಮೀರಿದ್ದು. ಈ ಮೊದಲು ಈ ಜಗತ್ತು ನಮಗೆ ಕಾಣುವಂತೆ ಸಪಾಟಾಗಿದೆಯೆಂದೂ ಸೂರ್ಯಚಂದ್ರರು ಇದನ್ನು ಸುತ್ತುವುದರಿಂದ ಹಗಲು ರಾತ್ರಿಗಳಾಗುತ್ತವೆಂದೂ ನಾವು ಈಗ ನಂಬಿರುವ ಸೌರ ಕೇಂದ್ರಿತ ಸಿದ್ಧಾಂತದಷ್ಟೇ ಪ್ರಬಲವಾಗಿ ನಂಬಲಾಗಿತ್ತಷ್ಟೆ! ಬೆಳಕು ಅಲೆಯೆಂದು ಸಾರುವ ಸಿದ್ಧಾಂತವನ್ನೂ ನಂಬಿ, ತದ್ವಿರುದ್ಧವಾಗಿ ಸಾರುವ ಕ್ವಾಂಟಂ ಥಿಯರಿಯನ್ನೂ ನಂಬಿ, ಎರಡರಿದಲೂ ಉಪಯೋಗ ಪಡೆಯುವ ನಾವು ಈ ಎರಡೂ ವಿರುದ್ಧ ಗಳನ್ನು ಒಂದು ಮಾಡಿದ ಪರಮಸತ್ಯದ ಬಗ್ಗೆ ತಲೆಕೆಡಿಸಿಕೊಳ್ಳದಿದ್ದರೆ ಹೇಗೆ? ಭೂತವನ್ನು ವರ್ತಮಾನ (ವರ್ತಮಾನದಲ್ಲ್ಲಿ ಅದಕ್ಕೆ ಯಾವುದೇ ಅಸ್ತಿತ್ವ/ದಾಖಲೆಗಳು ಇಲ್ಲದಿರುವುದರಿಂದ ) ಮಿಥ್ಯೆಯೆನ್ನುವುದಾದರೆ, ವರ್ತಮಾನದ ಭವಿಷ್ಯವೇನು? ಅಸಲು ಈ ಸತ್ಯಕ್ಕೆ ಇದಮಿತ್ತಂ ಎಂಬ ಅಸ್ತಿತ್ವ ಇದೆಯೆ? ಇದ್ದರೆ ಅದನ್ನು ದರ್ಶಿಸಲು ಸಾಕ್ಷಿಯ ಅಗತ್ಯವೇನು?ಸಾಕ್...

Some Digital art works

Image
Lines and Coloring using MS PAINT ; SPECIAL EFFECTS BY PICASA!!!. EYES OF DREAMS. TIGER WOMAN & FIRE

ಒಂದು ಭಾವಾಂತರ!

Movie:3 Idiots (2009) Music Director:Shantanu Moitra Director: Rajkumar Hirani Lyricist: Swanand Kirkire Starring: Aamir Khan, Madhavan, Kareena Kapoor, Sharman Joshi, Boman Irani Song Title: Give Me Some Sunshine ******* Sare umr hum/ mar marke jeeliye Ek pal to ab humein /jeene do Jeene do Na na na.Na na na.Na na na.Na na nana na Give me some sunshine Give me some rain Give me another chance I wanna grow up once again Bachpan to gayaa Javanee bhee gayee Ek pal to ab humein jeene do Jeene do Give me some sunshine.. once again Na na na…. ******* ಈ ಗೀತೆ ನನ್ನನ್ನು ಹೀಗೆ ಕಾಡಿತು: ಬದುಕೆಲ್ಲಾ ಸವೆದೆವು/ ಸವೆಯುತ್ತಾ ಕಳೆದವು ಅರೆಗಳಿಗೆ ಬಾ ಒಮ್ಮೆ/ ಬದುಕಾಗು/ಬೆಳಕಾಗು ಸಾ ಸಾ ಸರೀ....ರಿರಿರೀ ರೀರಿಗಾ...ಗಾ..ಗಾಗಗಾ..ಮಾಮಮ್ಮ್ಮಾಮಪಾ... ಓ ನನ್ನ ಬೆಳಕೇ ಅರಳೆನ್ನ ಒಳಗೇ ಕೈಹಿಡಿದು ಕಣ್ದೆರೆಸು ಮತ್ತೊಮ್ಮೆ ಹುಟ್ಟುವೆ! ಬರಿದಾದ ಬಾಲ್ಯಕೆ ಮರೆಯಾದ ಹರೆಯಕೆ ಅರೆಗಳಿಗೆ ಕಣ್ಣಾಗು ಬದುಕಾಗು ಬೆಳಕಾಗು ಓ ನನ್ನ ಬೆಳಕೇ....ಮತ್ತೊಮ್ಮೆ ಹುಟ್ಟುವೆ! ಸಾ ಸಾ ಸರೀ....ರಿರಿರೀ ರೀರಿಗಾ...ಗಾ..ಗಾಗಗಾ..ಮಾಮಮ್ಮ್ಮಾಮಪಾ...

ಹುಲಿ ಬಂತು ಹುಲಿ!!

Image
ಒಂದು ಪೆನ್ಸಿಲ್ ಸ್ಕೆಚ್ ಮತ್ತು ಅದರ ಡಿಜಿಟಲ್ ಸ್ಥಿತ್ಯಂತರಗಳು ೧. ಮೂಲ ಸ್ಕೆಚ್ ೨. ರಾತ್ರಿಯ ಬೇಟೆ! ೩. ಮತ್ತೊಂದು ರೂಪಾಂತರ ೪. ಬಣ್ಣದ ವೇಷ!

ಸಹಸ್ರಮಾನದ ಅತೀದೀರ್ಘ ಸೂರ್ಯಗ್ರಹಣ (೧೫.೦೧.೧೦) ಹಾಲಾಡಿಯಲ್ಲಿ ನನ್ನ ಮೊಬೈಲಿನ ವಿಜಿಎ ಕೆಮರಾ ಕಂಡಂತೆ!

Image
26.1.10 Eclips viewed from Halady

ಬೆಲೆಕಟ್ಟುವ ಆಯ್ಕೆ ನಮ್ಮ ಕೈಯಲ್ಲಿದೆ..

ಅಮೂಲ್ಯ : ಕಟ್ಟಲಾರದಷ್ಟು ಬೆಲೆಯುಳ್ಳದ್ದು, ಬೆಲೆ ಕಟ್ಟಲಾಗದ್ದು, ಇವುಗಳನ್ನು ಸಾಧಾರಣವಾಗೆ ಯಾರೂ ಸುಮ್ಮನೆ ಮಾರಲು ಹೋಗುವುದಿಲ್ಲ. ಆಸೆಯಿಂದ ತಮ್ಮಬಳಿಯಿಟ್ಟುಕೊಂಡು ಮೆರೆದಾಡಿ ಕೊನೆಗೆ ಬೆಲೆ ಕಟ್ಟಲಾಗದೇ ಹೋಗುತ್ತಾರೆ. ಒಮ್ಮೊಮ್ಮೆ ಕಳ್ಳ ಕಾಕರರ ಕಣ್ಣಿಗೆ ತುತ್ತಾಗಿ ಅದೇ ಆಸೆಗೆ ಅದರದ್ದಲ್ಲದ ಬೆಲೆತೆರುತ್ತಾರೆ. ಒಮ್ಮೊಮ್ಮೆ ಕಷ್ಟ ಕಾಲದಲ್ಲಿ ಬೆಲೆ ನಿರ್ಧರಿಸಲಾರದೆ ಮಾರಿಯೂ ಯಾಮಾರುತ್ತರೆ! ಮತ್ತೆ ಅದೇ ಕೊರಗಿನಲ್ಲಿ ಕೊನೆಯಾಗುತ್ತಾರೆ! ಅಮೌಲ್ಯ: ಬೆಲೆಯೇ ಇಲ್ಲದ್ದು, ನಿಕೃಷ್ಟವಾದದ್ದು, ಇಂಥವುಗಳಿಂದ ದೂರವಿರಲು ಅಥವಾ ಇಂಥವುಗಳನ್ನು ದೂರವಿಡಲು ವಿಪರೀತ ಖರ್ಚುಮಾಡುವ ಜನರಿದ್ದಾರೆ! ಯಾರಾದರೂ ಇವುಗಳಿಗೆ ಬೆಲೆಕಟ್ಟಲು ಬಂದರೆ ಅವರೂ ಅಮೌಲ್ಯರೆ! ಕೆಲವೊಮ್ಮೆ ಹೀಗೂ ಆಗುತ್ತದೆ: ಅನಿಷ್ಟದ ಕಲ್ಲೆಂದು ಜೋಯಿಸರ ಮಾತಿನಂತೆ ತಿಳಿದು ಸಾವಿರಾರು ಮೈಲಿಯಷ್ಟು ದೂರದ ಕಾಶಿಗೆ ಹೋಗಿ ನದಿಗೆಸೆದ ಮೇಲೂ ಗೌಡರು ಯಾರೋ ಹೇಳಿದರೆಂದು ಮತ್ತೆ ಆ ವಜ್ರವನ್ನು ಹುಡುಕಲು ಹೋಗಬಾರದಿತ್ತು! ಲೇಬಲ್ ಇಲ್ಲದೆ ಭಗವಂತ ಸೃಷ್ಟಿಸುತ್ತಾನೆ!... ಬೆಲೆಕಟ್ಟುವ ಆಯ್ಕೆ ನಮ್ಮ ಕೈಯಲ್ಲಿದೆ...

ಬ್ರಹ್ಮರಥ.

Image
ರಥ ಎಳೆಯುತ್ತೇನೆಂದು ಹಮ್ಮಿಂದ ಹೋಗಿ ಮಿಳ್ಳೆಗೆ ಕೈ ಹಾಕಿದ್ದಷ್ಟೇ ದಿಟ. ಬಹುಷ: ಯಾರಿಗೂ ರಥವನ್ನು ಎಳೆದ ಅನುಭವ ಆಗಿರಲಿಕ್ಕಿಲ್ಲ. ರಥ ನಾವೆಲ್ಲ ಅಂದುಕೊಂಡಂತೆ ತನ್ನ ಗಮ್ಯ ಸೇರಿತು. ಉಳಿದದ್ದು ಕೈ ಹಾಕಿದ ಧನ್ಯತೆ ಮತ್ತು ಅಳಿದದ್ದು ಹಮ್ಮು ಮಾತ್ರ! ಈ ಬದುಕೂ ಹಾಗೆ! ಒಂದು ಆಶಾಭಾವ -ಒಂದು ಉತ್ಸಾಹ-ಸಾಧ್ಯವಾದಷ್ಟು ಒಳ್ಳೆಯ ಮನಸ್ಸು ಮತ್ತು ರುಚಿಗೆ ತಕ್ಕಷ್ಟು ಹಮ್ಮಿಂದ ಬರಿದೆ ಜಗ್ಗಬೇಕಾದ ಒಂದು ಬ್ರಹ್ಮರಥವಷ್ಟೆ!