Posts

Showing posts from July, 2010

ನೂತನ ಸತ್ಯಾನ್ವೇಷಣೆ!

ಭಾರತೀಯ ಸಂಸ್ಕೃತಿಯಲ್ಲಿ ಸತ್ಯಕ್ಕೆ ಬಲುದೊಡ್ಡ ಸ್ಥಾನವಿದೆ. ಭಾರತೀಯರ ಸತ್ಯದ ಹಸಿವಿಗೆ ಕೊನೆಯಿಲ್ಲದಂತೆ ದಿನಕ್ಕೊಂದು ಸಿದ್ಧಾಂತಗಳು ಧರ್ಮಗಳು ಅವುಗಳ ಶಾಖೋಪಶಾಖೆಗಳು ಹುಟ್ಟಿ ವಿಕಸಿತಗೊಂಡು ಇಂದಿನ ದಿನ ಜಗತ್ತಿಗೆ ಒಂದು ಆಕರ್ಷಣೆಯ ಬಿಂದುವಾಗಿ ಕಾಣಲು ಕಾರಣವಾಗಿವೆ. ನಮಗೆ ಹೇಳುವ ಸತ್ಯಕ್ಕಿಂತ, ಕಾಣುವ -ಕೇಳುವ-ಅನುಭವಿಸಿ ದಕ್ಕಿಸಿಕೊಂಡಿದ್ದಕ್ಕಿಂತ ಮೂಲದ ಅರಿಯುವ ಅರಿತೂ ಅರಿಯದೇ ಉಳಿದ ನಿತ್ಯ ಸತ್ಯವೇ ಮುಖ್ಯ. ಸತ್ಯದ ಮುಖಗಳು: ಸತ್ಯವು ಸತ್ಯಾನ್ವೇಷಕನನ್ನೂ ಶ್ರುತಿಕಾರನನ್ನೂ, ಶ್ರುತಿ ಸ್ಮೃತಿಗಳನ್ನೂ ಮೀರಿದ್ದು. ಈ ಮೊದಲು ಈ ಜಗತ್ತು ನಮಗೆ ಕಾಣುವಂತೆ ಸಪಾಟಾಗಿದೆಯೆಂದೂ ಸೂರ್ಯಚಂದ್ರರು ಇದನ್ನು ಸುತ್ತುವುದರಿಂದ ಹಗಲು ರಾತ್ರಿಗಳಾಗುತ್ತವೆಂದೂ ನಾವು ಈಗ ನಂಬಿರುವ ಸೌರ ಕೇಂದ್ರಿತ ಸಿದ್ಧಾಂತದಷ್ಟೇ ಪ್ರಬಲವಾಗಿ ನಂಬಲಾಗಿತ್ತಷ್ಟೆ! ಬೆಳಕು ಅಲೆಯೆಂದು ಸಾರುವ ಸಿದ್ಧಾಂತವನ್ನೂ ನಂಬಿ, ತದ್ವಿರುದ್ಧವಾಗಿ ಸಾರುವ ಕ್ವಾಂಟಂ ಥಿಯರಿಯನ್ನೂ ನಂಬಿ, ಎರಡರಿದಲೂ ಉಪಯೋಗ ಪಡೆಯುವ ನಾವು ಈ ಎರಡೂ ವಿರುದ್ಧ ಗಳನ್ನು ಒಂದು ಮಾಡಿದ ಪರಮಸತ್ಯದ ಬಗ್ಗೆ ತಲೆಕೆಡಿಸಿಕೊಳ್ಳದಿದ್ದರೆ ಹೇಗೆ? ಭೂತವನ್ನು ವರ್ತಮಾನ (ವರ್ತಮಾನದಲ್ಲ್ಲಿ ಅದಕ್ಕೆ ಯಾವುದೇ ಅಸ್ತಿತ್ವ/ದಾಖಲೆಗಳು ಇಲ್ಲದಿರುವುದರಿಂದ ) ಮಿಥ್ಯೆಯೆನ್ನುವುದಾದರೆ, ವರ್ತಮಾನದ ಭವಿಷ್ಯವೇನು? ಅಸಲು ಈ ಸತ್ಯಕ್ಕೆ ಇದಮಿತ್ತಂ ಎಂಬ ಅಸ್ತಿತ್ವ ಇದೆಯೆ? ಇದ್ದರೆ ಅದನ್ನು ದರ್ಶಿಸಲು ಸಾಕ್ಷಿಯ ಅಗತ್ಯವೇನು?ಸಾಕ್