Posts

Showing posts from August, 2020

ಬಾಳಕುದುರು ಮಠದ ಇತಿಹಾಸ

Image
 ಮೂಲ ಲೇಖನ: ಡಾ. ಪಿ. ಗುರುರಾಜ ಭಟ್  ಉಲ್ಲೇಖ : "ಸ್ವಾತಂತ್ರ್ಯಾಂಕ" ಎಂಬ ಅಂಕಣ. "ಪ್ರಕಾಶ" ಎಂಬ  ಪುಸ್ತಕ 1969  ಸಂಗ್ರಹ: ಶ್ರೀ ನಾಗರಾಜ ವಾರಂಬಳ್ಳಿ, ಹವ್ಯಾಸಿ ಛಾಯಾಗ್ರಾಹಕ, ಮೂಡುಗರಡಿ, ಬ್ರಹ್ಮಾವರ  ದಿನಾ೦ಕ ೧೧.೦೮.೨೦೨೦ ರಂದು "ಶ್ರೀಮಠ ಬಾಳೆಕುದುರು" ಇವರ facebook ಪೇಜ್ ನಲ್ಲಿ ಪ್ರಕಟಗೊಂಡ ಲೇಖನದ ಪ್ರತಿಯಲ್ಲಿರುವಂತೆ. ದಕ್ಷಿಣಕನ್ನಡ ಜಿಲ್ಲೆಯ ಧಾರ್ಮಿಕ ಸಂಸ್ಥೆಗಳಲ್ಲಿ ಬಾಳಕುದುರು ಮಠವು ಒಂದಾಗಿದೆ. ಇದು ಇತಿಹಾಸ ಕಾಲದಲ್ಲಿ ನಮ್ಮ ಜಿಲ್ಲೆಯಲ್ಲಿ ತುಂಬಾ ಪ್ರಭಾವಿತವಾದ ಮಠವಾಗಿತ್ತು. ಈ ಮಠಕ್ಕೆ ಅನೇಕ ಕಡೆಗಳಲ್ಲಿ ಶಿಷ್ಯವರ್ಗವಿತ್ತು. ಮಾತ್ರವಲ್ಲದೆ ಈ ಶಿಷ್ಯವರ್ಗವು ಇಂದಿಗೂ ವ್ಯಾಪಿಸಿಕೊಂಡಿದೆ ಎಂಬ ವಿಷಯವು ಗಮನಾರ್ಹವಾಗಿದೆ. ಈ ಮಠಕ್ಕೆ ಈಗ ಐರೋಡಿ, ಕೋಡಿ, ನೀಲಾವರ, ಚೇರ್ಕಾಡಿ, ಒಡ್ದರ್ಸೆ, ಹಾನೇಹಳ್ಳಿ, ಬಳ್ಕೂರು, ಕಂದಾವರ, ಹುತ್ತೂರು, ಅಂಜಾರು ಇತ್ಯಾದಿ ಗ್ರಾಮಗಳಲ್ಲಿ ಆಸ್ತಿ ಇರುವುದು ಕಂಡು ಬರುತ್ತದೆ. ಹುತ್ತೂರು ಮತ್ತು ಅಂಜಾರುಗಳಲ್ಲಿ ಉಪಮಠಗಳು ಇರುವುದನ್ನು ಗಮನಿಸಬಹುದು.  ಶ್ರೀಮಠ ಬಾಳಕುದುರು ಸುತ್ತ ಮುತ್ತ    ಬಾಳಕುದುರು ಮಠವು  ಭಾಗವತ ಸಂಪ್ರದಾಯ ವನ್ನು ಎತ್ತಿ ಹಿಡಿಯುವ ಒಂದು ಧಾರ್ಮಿಕ ಕೇಂದ್ರ. ಈ ಮಠವು ಉಡುಪಿ ತಾಲೂಕಿನ(೧೯೬೯ ರಂತೆ) ಮಾಬುಕಳದ  ಸಮೀಪವಿರುವ ಬಾಳಕುದುರು ಗ್ರಾಮದಲ್ಲಿದೆ. ಈ ಮಠದ ಸಮೀಪ ಹಂಗಾರಕಟ್ಟೆ ಎಂಬ ಚಿಕ್ಕ ಬಂದರಿದೆ.  ಬಾರಕೂರು ಸಂಸ್ಥಾನ  ವಾಗಿದ್ದ