ಬದುಕು ಹೊಸದಾದ ಕತೆ
ರಾತ್ರಿ ಪಾಳಿಯ ಇಬ್ಬರು ಕೆಲಸಗಾರರನ್ನು ಹೊತ್ತುಕೊಂಡು ಬಂದ ಗಾಡಿಗೆ ತಲೆ ಬಾಚದಿದ್ದರೂ ಸ್ನಾನ ಮಾಡಿದ ನೆಮ್ಮದಿಯಿಂದ ಹತ್ತಿ ಡ್ರೈವರ್ ಪಕ್ಕ ಕುಳಿತೆ. ಅವರನ್ನೆಲ್ಲ ಗೂಡು ಸೇರಿಸಿ ಹಗಲಿನವರನ್ನು ಕರೆದುಕೊಂಡು ಸೈಟ್ ಸೇರುವ ತರಾತುರಿಯಲ್ಲಿತ್ತು ಗಾಡಿ. ಹೀಗೆ ಎಪ್ಪತ್ತು ಎಂಭತ್ತರ ಸ್ಪೀಡಿನಲ್ಲಿ ಸಾಗುವಾಗ ತಣ್ಣಗೆ ಮಳೆ ಹನಿಯುತ್ತಿತ್ತು. ಸಿಡಿ ಯಲ್ಲಿ ಹೊಸದಾಗಿ ಜಾಕಿ ಹಾಡು ....ಎಕ್ಕ ರಾಜ ರಾಣಿ ನನ್ನಕೈ ಒಳಗೆ.... ಇನ್ನೂ ಮುಂದಿನ ಸಾಲು ಬಂದಿಲ್ಲ ಅದಾಗಲೇ ಅಡ್ಡರಸ್ತೆಯಿಂದೊಂದು ನಮ್ಮಷ್ಟೇ ದೊಡ್ಡ ವಾಹನ ಫುಲ್ ಲೋಡಾಗಿ ನಮ್ಮಗಿಂತ ಸ್ಪೀಡಿನಲ್ಲಿ ವಕ್ಕರಿಸಿದ್ದ. ನಮ್ಮ ಸ್ಪೀಡಿಗೆ ಬ್ರೇಕ್ ಹಾಕಿದ್ದರೂ ಢಿಕ್ಕಿ ಗ್ಯಾರೆಂಟಿ, ಎಡದಿಕ್ಕಿನಿಂದ ನುಗ್ಗಿದರೂ ಅದೇ ಕಥೆ. ಬಾಕಿ ಬಿದ್ದಿದ್ದು ಬಲಬದಿ....ನುಗ್ಗಿಸುವ ಪ್ರಯತ್ನದಲ್ಲಿ ಚಾಲಕನ ನಿಯಂತ್ರಣ ತಪ್ಪುತ್ತಿರುವುದು ತಿಳಿದಂತೆ ಎಲ್ಲದಕ್ಕೂ ಸಿದ್ಧನಾಗಿ ಕಣ್ಮುಚ್ಚಿದೆ. ನಕ್ಷತ್ರ ಲೋಕ ಕಂಡಂತಾದ ಹೊತ್ತಿಗೇ ತೂಗುಯ್ಯಲೆಯಲ್ಲಿ ತೇಲಿದ ಅನುಭವ. ಎಡಭುಜವನ್ನೂರಿ ಹಾಸಿಗೆಯ ಮೇಲೆ ಬಿದ್ದಂತಾಗುವಾಗಲೇ ಯಾರೋ ಮುಖಕ್ಕೆ ನೀರು ಸಿಂಪಡಿಸಿದಂತಾಗಿ ಕಣ್ತೆರೆದೆ. ಗಾಡಿಯ ಕೆಳಭಾಗದಲ್ಲಿ ಸಣ್ಣ ಹೊಗೆ ಕಂಡಂತಾಗಿ ಸಿನೆಮಾಗಳಲ್ಲಿ ನೋಡಿದ ಇಂಜಿನ್ ಸ್ಪೋಟದ ನೆನೆಪಾಗಿ ಓಟಕ್ಕಿತ್ತೆ...ನುಗ್ಗಿದ್ದು ಅಲ್ಲೊಂದು ಹೋಟೆಲ್ ಒಳಗೆ..ಅಲ್ಲೊಂದು ಕುರ್ಚಿಯ ಮೇಲೆ ಕುಳಿತ ನಂತರ ಕೈಕಾಲು ನಡುಕ ಅನುಭವಕ್ಕೆ ಬಂತು. ಯಾರೋ ಬಟ್ಟೆ ತಂದು...