Posts

Showing posts from August, 2013

ಕಲಿ

ಮೊನ್ನೆ ದಾರಿಯಲಿ ಕಂಡರಿಯದ ಕಾಳ ಪುರುಷಾಕೃತಿ ನನ್ನ ಪಾಡಿಗೆ ಹೋಗಲಾರದೆ ಹಲ್ಕಿರಿದೆ ಕುತೂಹಲ ತಾಳಲಾರದೆ ಕೈ ಚಾಚಿದೆ ಯಾರೆಂದು ಕೇಳಿದೆ ಪ್ರಿತಿಯಿಂದ ಹೇಳಿದ ’ ನಾನು ಕಲಿಪುರುಷ ’ ’ ಅಂದರೆ ನೀನು... ’ ’ ಅವನೆ! ’ ’ ಮನುಜರಲ್ಲಿ ವಿಷ ಬಿತ್ತುವವನು ’ ’........’ ’ ಅರಿಷಡ್ವರ್ಗಗಳನ್ನು ಮೆರೆಸುವವನು ’ ’ ಅನ್ಯಾಯ ಮಾಡಿಸುವವನು ’ ’ ರಕ್ತಪಾತಗಳಿಗೆ ಕಾರಣವಾಗುವವನು ’ ’ ನಿನ್ನ ಮೇಲೆ ಯುದ್ಧ ಸಾರಿದ್ದೇನೆ; ನಿನ್ನ ರಕ್ತ ಕುಡಿದೇ ನಾನು ನಿದ್ದೆ ಮಾಡುವುದು ’ ’ ಮಾನವ ಕುಲವೇ ನಿನ್ನ ವಿರುದ್ಧ ಸೇನೆಯಾಗಿ ಕಾದುತ್ತದೆ; ನಿನ್ನ ತಲೆ ನನ್ನ ಕಾಲ್ಚೆಂಡಾಗುತ್ತದೆ ’ ನಗುತ್ತಲೆಂದ, ’ ನನಗೆ ಯುದ್ಧ ಬೇಡ , ಆದರೆ ನಿನ್ನಲ್ಲಿನ ಯುದ್ಧಕ್ಕೆ ರಕ್ತ ಬೇಕು ’ ನಾವು ಯಾವಾಗ ಕಲಿಯುವುದೋ!