ಕಲಿ
ಮೊನ್ನೆ ದಾರಿಯಲಿ
ಕಂಡರಿಯದ ಕಾಳ
ಪುರುಷಾಕೃತಿ
ನನ್ನ ಪಾಡಿಗೆ ಹೋಗಲಾರದೆ
ಹಲ್ಕಿರಿದೆ
ಕುತೂಹಲ ತಾಳಲಾರದೆ ಕೈ
ಚಾಚಿದೆ
ಯಾರೆಂದು ಕೇಳಿದೆ
ಪ್ರಿತಿಯಿಂದ ಹೇಳಿದ
’ನಾನು ಕಲಿಪುರುಷ’
’ಅಂದರೆ ನೀನು...’
’ಅವನೆ!’
’ಮನುಜರಲ್ಲಿ ವಿಷ ಬಿತ್ತುವವನು’
’........’
’ಅರಿಷಡ್ವರ್ಗಗಳನ್ನು ಮೆರೆಸುವವನು’
’ಅನ್ಯಾಯ ಮಾಡಿಸುವವನು’
’ರಕ್ತಪಾತಗಳಿಗೆ ಕಾರಣವಾಗುವವನು’
’ನಿನ್ನ ಮೇಲೆ ಯುದ್ಧ ಸಾರಿದ್ದೇನೆ; ನಿನ್ನ ರಕ್ತ
ಕುಡಿದೇ ನಾನು ನಿದ್ದೆ ಮಾಡುವುದು’
’ಮಾನವ ಕುಲವೇ ನಿನ್ನ ವಿರುದ್ಧ ಸೇನೆಯಾಗಿ ಕಾದುತ್ತದೆ;
ನಿನ್ನ ತಲೆ ನನ್ನ ಕಾಲ್ಚೆಂಡಾಗುತ್ತದೆ’
ನಗುತ್ತಲೆಂದ,
’ನನಗೆ ಯುದ್ಧ ಬೇಡ , ಆದರೆ ನಿನ್ನಲ್ಲಿನ ಯುದ್ಧಕ್ಕೆ
ರಕ್ತ ಬೇಕು’
ನಾವು ಯಾವಾಗ
ಕಲಿಯುವುದೋ!
Comments
Post a Comment