Posts

Showing posts from September, 2019

ವರ್ಣಾಶ್ರಮಗಳು ಮತ್ತು ಧರ್ಮ

ವೇದಗಳಲ್ಲಿ ಎಷ್ಟೋ ವಿಷಯಗಳನ್ನು ಬೀಜರೂಪದಲ್ಲಿ ಹೇಳಲಾಗಿದೆ. (ಶ್ರುತಿ) ಇವುಗಳನ್ನು ಸ್ಮೃತಿಗಳಲ್ಲಿ ಶಾಸ್ತ್ರ ರೂಪದಲ್ಲಿ (ಶಾಸನಗಳಂತೆ) ವಿವರಿಸಲಾಗಿದೆ. ಪುರಾಣಗಳಲ್ಲಿ ಕಥೆಗಳ ಮೂಲಕ ತಿಳಿಹೇಳುವ ಪ್ರಯತ್ನ ಮಾಡಲಾಗಿದೆ. ಇತಿಹಾಸಗಳ ದೃಷ್ಟಾಂತಗಳನ್ನಿಟ್ಟು ಇವುಗಳನ್ನೇ ವಿವರಿಸುತ್ತಾ ಮಹಾಕಾವ್ಯಗಳನ್ನು ಹಣೆಯಲಾಗಿದೆ. ಸಾಲದಕ್ಕೆ ಇವುಗಳನ್ನು ಯೋಗ್ಯ ರೀತಿಯಲ್ಲಿ ವಿವರಿಸಲು ಸಿದ್ಧಾಂತ - ಭಾಷ್ಯಗಳು ಬಂದಿವೆ. ಶೃತಿಯೊಂದನ್ನು ಬಿಟ್ಟು ಎಲ್ಲದರಲ್ಲೂ ಅಷ್ಟಿಷ್ಟು ಧನಾತ್ಮಕ ಹಾಗೂ ಋಣಾತ್ಮಕ ಪ್ರಕ್ಷೇಪಗಳು, ಕವಿಸಮಯಾದಿಗಳು ಸೇರಿಹೋಗಿವೆ. ಇವುಗಳೆಲ್ಲದರ ಪ್ರಕಾರ ನಾಲ್ಕು ವರ್ಣಗಳು ಹಾಗೂ ನಾಲ್ಕು ಆಶ್ರಮಗಳನ್ನು ಹೇಳಲಾಗಿದ್ದು ಎಲ್ಲವಕ್ಕೂ ತಮ್ಮದೇ ಆದ ಕಟ್ಟುಪಾಡುಗಳಿವೆ. ಶೂದ್ರರಿಗೆ ಗ್ರಹಸ್ಥ ಧರ್ಮವೊಂದೇ ಇದ್ದರೂ ಅದರಲ್ಲಿ ಇತರರಿಗಿರುವಷ್ಟು ಕಟ್ಟುಪಾಡುಗಳಿಲ್ಲ. ಒಂದು ರೀತಿಯಲ್ಲಿ ಸ್ವತಂತ್ರ ಜೀವನ ಅವರದ್ದು. ಇದು ವರ್ಣಗಳಿಗೆಲ್ಲ ಪಂಚಾಂಗ ಇರುವಂತೆ. ಎಲ್ಲರೂ ಶೂದ್ರರನ್ನು ಅವಲಂಬಿಸಬೇಕು. ಅವರ ಸಂಖ್ಯೆ ಹೆಚ್ಚು. ಅವರಿಂದಲೇ ಸಮೃದ್ಧಿ, ಅವರಿಂದಲೇ ಉತ್ಪಾದನೆ, ಅವರು ರಾಷ್ಟ್ರದ ಸಂಪತ್ತು. ಅವರು ಲೋಹಶಾಸ್ತ್ರ, ಕಾಷ್ಟಶಾಸ್ತ್ರ, ತಂತ್ರಜ್ಞಾನ, ಕೃಷಿ ಮುಂತಾದ ಜೀವನಕಲೆಗಳನ್ನು ಬದುಕುವವರು. ಇವರು ಧನಧಾನ್ಯಸಂಚಯ ಮಾಡಬಹುದು ಆಸ್ತಿ ಪಾಸ್ತಿಗಳೆಲ್ಲ ಇವರ ಸ್ವತ್ತು. ವೈಶ್ಯರಿಗೆ ಬ್ರಹ್ಮಚರ್ಯ ಹಾಗೂ ಗೃಹಸ್ಥ ಧರ್ಮಗಳ ಕಟ್ಟುಪಾಡುಗಳಿವೆ. ಶೂದ್ರ...