ನಾವಿಂದು ತುಂಬಾ ಬೆಳೆದುಬಿಟ್ಟಿದ್ದೇವೆಂದುಕೊಳ್ಳುತ್ತೇವೆ, ಹಾಗೆಯೇ ವೈಜ್ಞಾನಿಕವೆಂಬ ಹಣೆಪಟ್ಟಿಯೊಂದಿಗೆ ಬರುವ ಏನನ್ನೂ ನಂಬಿ ಅದರಿಂದಾಗುವ ಪರಿಣಾಮವನ್ನು ಲೆಕ್ಕಿಸದೆ ಮುನ್ನಡೆಯುವಷ್ಟು ವಿವೇಕಿಗಳಾಗಿದ್ದೇವೆ ಕೂಡಾ! ಅಂದು ಹಸಿರುಕ್ರಾಂತಿಯ ನೆಪದಲ್ಲಿ ನಮ್ಮಲ್ಲಿದ್ದ ಎಲ್ಲಾ ದೇಶೀಯ ತಳಿಯ ಸತ್ವಯುತ ಅನ್ನಾಹಾರದ ಬೆಳೆಗಳನ್ನೂ, ಜಾನುವಾರುಗಳನ್ನೂ ಲಾಭದ ಆಸೆಗೆ ಬಲಿಕೊಟ್ಟು, ನಮ್ಮ ನೆಲಕ್ಕೆ ರಾಸಾಯನಿಕ ಗೊಬ್ಬರಗಳನ್ನು ಕೀಟನಾಶಕಗಳನ್ನು ವಿಷಪ್ರಮಾಣದಲ್ಲಿ ಉಣಬಡಿಸಿ, ಅದರ ಎಲ್ಲಾ ಪರಿಣಾಮಗಳನ್ನೂ ಅನುಭವಿಸುತ್ತಾ ಎಲ್ಲಾ ಹೈಬ್ರೀಡ್ ತಳಿಗಳಂತೆ ನಾವೂ ಬೀಜರಹಿತ ಜನಾಂಗವಾಗಿ ಇದೀಗ ಕೃಷಿಯನ್ನೇ ಮರೆಯುವ ಹಂತಕ್ಕೆ ಬಂದು ನಿಂತಿದ್ದೇವೆ! ಇಂದಿಗೂ ಗ್ರಹಗತಿಯನ್ನು ಪ್ರಶ್ನಿಸುವ ನಾವು ಅಷ್ಟು ಕರಾರುವಕ್ಕಾಗಿ ಗ್ರಹಣವನ್ನೂ ಸೂರ್ಯೋದಯ ಸೂರ್ಯಾಸ್ತವನ್ನೂ ದೇಶ ಕಾಲಗಳಿಗೆ ತಕ್ಕಂತೆ ನಿರೂಪಿಸುವ ಅದೇ ಜ್ಯೋತಿಷದ ಪ್ರಶ್ನೆಗೆ ಕುರುಡರಾಗಿ ಹೋಗುತ್ತಿದ್ದೇವೆ. ಹಾಗಾದರೆ ಯಾವುದು ಸತ್ಯ? ನಮ್ಮ ಕಣ್ಣು, ಕಿವಿ, ಮೂಗು,ನಾಲಗೆ ಮತ್ತು ಚರ್ಮಗಳ ಅನುಭವಕ್ಕೆ ಬಂದವು ಮಾತ್ರವೆ? NASA ದಿಂದ ಧೃಡೀಕರಣಗೊಂಡ ಅಜ್ಜಿ ಕತೆಗಳೂ ಇದರ ಫರಿದಿಗೆ ಸೇರುತ್ತವೆ? ಮಾಧ್ಯಮಗಳಲ್ಲಿ ವೈಭವೀಕರಿಸಲ್ಪಟ್ಟ ಕುರುಡು ನಂಬಿಕೆಗಳೆ? ನಾವು ಇಂದು ಮತ್ತು ಇಂದಿನವರೆಗೆ ಸತ್ಯವೆಂದು ನಂಬಿರುವವೆಲ್ಲಾ ಶಾಶ್ವತ ಸತ್ಯಗಳೆ? ಈ ಸತ್ಯಕ್ಕೆ ಎಷ್ಟು ಮುಖ ಮತ್ತು ಅದು ಎಷ್ಟು ಸುಂದರವಾಗಿ ನಿರೂಪಿಸಲ್ಪಡಬಹುದಂತಾ...