ಬೆಲೆಕಟ್ಟುವ ಆಯ್ಕೆ ನಮ್ಮ ಕೈಯಲ್ಲಿದೆ..
ಅಮೂಲ್ಯ : ಕಟ್ಟಲಾರದಷ್ಟು ಬೆಲೆಯುಳ್ಳದ್ದು, ಬೆಲೆ ಕಟ್ಟಲಾಗದ್ದು,
ಇವುಗಳನ್ನು ಸಾಧಾರಣವಾಗೆ ಯಾರೂ ಸುಮ್ಮನೆ ಮಾರಲು ಹೋಗುವುದಿಲ್ಲ. ಆಸೆಯಿಂದ ತಮ್ಮಬಳಿಯಿಟ್ಟುಕೊಂಡು ಮೆರೆದಾಡಿ ಕೊನೆಗೆ ಬೆಲೆ ಕಟ್ಟಲಾಗದೇ ಹೋಗುತ್ತಾರೆ. ಒಮ್ಮೊಮ್ಮೆ ಕಳ್ಳ ಕಾಕರರ ಕಣ್ಣಿಗೆ ತುತ್ತಾಗಿ ಅದೇ ಆಸೆಗೆ ಅದರದ್ದಲ್ಲದ ಬೆಲೆತೆರುತ್ತಾರೆ. ಒಮ್ಮೊಮ್ಮೆ ಕಷ್ಟ ಕಾಲದಲ್ಲಿ ಬೆಲೆ ನಿರ್ಧರಿಸಲಾರದೆ ಮಾರಿಯೂ ಯಾಮಾರುತ್ತರೆ! ಮತ್ತೆ ಅದೇ ಕೊರಗಿನಲ್ಲಿ ಕೊನೆಯಾಗುತ್ತಾರೆ!
ಅಮೌಲ್ಯ: ಬೆಲೆಯೇ ಇಲ್ಲದ್ದು, ನಿಕೃಷ್ಟವಾದದ್ದು,
ಇಂಥವುಗಳಿಂದ ದೂರವಿರಲು ಅಥವಾ ಇಂಥವುಗಳನ್ನು ದೂರವಿಡಲು ವಿಪರೀತ ಖರ್ಚುಮಾಡುವ ಜನರಿದ್ದಾರೆ! ಯಾರಾದರೂ ಇವುಗಳಿಗೆ ಬೆಲೆಕಟ್ಟಲು ಬಂದರೆ ಅವರೂ ಅಮೌಲ್ಯರೆ!
ಕೆಲವೊಮ್ಮೆ ಹೀಗೂ ಆಗುತ್ತದೆ:
ಅನಿಷ್ಟದ ಕಲ್ಲೆಂದು ಜೋಯಿಸರ ಮಾತಿನಂತೆ ತಿಳಿದು ಸಾವಿರಾರು ಮೈಲಿಯಷ್ಟು ದೂರದ ಕಾಶಿಗೆ ಹೋಗಿ ನದಿಗೆಸೆದ ಮೇಲೂ ಗೌಡರು ಯಾರೋ ಹೇಳಿದರೆಂದು ಮತ್ತೆ ಆ ವಜ್ರವನ್ನು ಹುಡುಕಲು ಹೋಗಬಾರದಿತ್ತು!
ಲೇಬಲ್ ಇಲ್ಲದೆ ಭಗವಂತ ಸೃಷ್ಟಿಸುತ್ತಾನೆ!... ಬೆಲೆಕಟ್ಟುವ ಆಯ್ಕೆ ನಮ್ಮ ಕೈಯಲ್ಲಿದೆ...
Comments
Post a Comment